Maraka Graha, Maraka Bhava, Astrology kannada, jyothishya kannada, Sricharananda

ನಿಮ್ಮ ಜಾತಕದಲ್ಲಿ ನಿಮಗೆ ಮಾರಕ ಗ್ರಹ ಯಾವುದು?


-by ಶ್ರೀಚರಾನಂದ (ಶ್ರೀ ಚಂದ್ರಶೇಖರ ರಾಜಾನಂದ )

ಜನ್ಮಜಾತಕದಲ್ಲಿ ಆಯುಸ್ಥಾನಕ್ಕೆ ಮಾರಕವಾದ ಗ್ರಹವನ್ನು ‘ಮಾರಕ ಗ್ರಹ’ ವೆಂದು ಕರೆಯಲಾಗುತ್ತದೆ.

ನಮ್ಮ ಜಾತಕದಲ್ಲಿ ನಮಗೆ ಮಾರಕ ಗ್ರಹ ಯಾವುದು ಎಂಬುವುದನ್ನು ತಿಳಿಯುವ ಮೊದಲು ನಾವು ಆಯು ಭಾವಗಳ ವಿಚಾರವನ್ನ ತಿಳಿಯಬೇಕು.

ಆಯುಸ್ಥಾನ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ಜಾತಕದಲ್ಲಿ ಅಂದರೆ ಲಗ್ನ ಕುಂಡಲಿಯಲ್ಲಿ ೮ ನೇ ಭಾವವನ್ನು ಆಯುಸ್ಥಾನ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವ್ಯಕ್ತಿಯ ಲಗ್ನ ಕುಂಡಲಿಯಲ್ಲಿ 8ನೇ ಭಾವ ಜಾತಕನ ಆಯುಷ್ಯವನ್ನು ಸೂಚಿಸುತ್ತದೆ.

| ಭಾವಾತ್ ಭಾವಮ್ ಸಿದ್ಧಾಂತ

ಭಾವಾತ್ ಭಾವಮ್ ಸಿದ್ಧಾಂತದ ಪ್ರಕಾರ ಕುಂಡಲಿಯಲ್ಲಿ ಒಂದು ಪ್ರತ್ಯೇಕ ಸಂಖ್ಯೆಯ ಭಾವವು ಯಾವ ಫಲಗಳನ್ನು ಸುಚಿಸುವುದೋ, ಆ ಭಾವದಿಂದ ಅಷ್ಟೇ ಸಂಖ್ಯೆಯ ಮುಂದಿನ ಭಾವವು ಅದೇ ಫಲಗಳ ವಿಚಾರವನ್ನು ಸೂಚಿಸುತ್ತದೆ.

  • ಉದಾಹರಣೆಗೆ : ಜನ್ಮ ಕುಂಡಲಿಯಲ್ಲಿ ೮ ನೇ ಭಾವವು ಆಯುಷ್ಯದ ವಿಕಾರವನ್ನು ತಿಳಿಸುವುದರಿಂದ , ಆ ೮ನೇ ಭಾವದಿಂದ ೮ ನೇ ಮನೆಯಾದ ೩ ನೇ ಭಾವವೂ ಕೂಡ ಆಯುಷ್ಯದ ವಿಚಾರವನ್ನು ತಿಳಿಸುತ್ತದೆ.

। ವ್ಯಯ ಸ್ಥಾನ ಅಥವಾ ೧೨ನೇ ಭಾವ

ಜನ್ಮಕುಂಡಲಿಯಲ್ಲಿ ೧೨ನೇ ಭಾವವನ್ನು ವ್ಯಯ ಸ್ಥಾನ ಎಂದು ಹೇಳಲಾಗುತ್ತದೆ. ಅದೇ ರೀತಿ ಜನ್ಮ ಕುಂಡಲಿಯಲ್ಲಿ ಯಾವುದೇ ಭಾವದಿಂದ 12 ನೇ ಮನೆಯು ಆ ಆಯಾ ಭಾವಗಳಿಗೆ ವ್ಯಯಸ್ಥಾನ ವಾಗಿರುತ್ತೆ.

  • ಉದಾಹರಣೆ : ಜನ್ಮ ಕುಂಡಲಿಯಲ್ಲಿ 8ನೆಯ ಭಾವವನ್ನು ತೆಗೆದುಕೊಳ್ಳೋಣ, ಆ 8ನೇ ಭಾವದಿಂದ 12ನೆಯ ಮನೆಯು ಆ 8ನೇ ಭಾವದ ಫಲಗಳನ್ನು ವ್ಯಯ ಗೊಳಿಸುತ್ತದೆ , ನಷ್ಟಗೋಳಿಸುತ್ತದೆ.
  • ಅಂದರೆ 8ನೇ ಭಾವ ಆಯುಷ್ಯದ ವಿಚಾರವನ್ನು ತಿಳಿಸುಸುವುದರಿಂದ ೮ನೇ ಭಾವದಿಂದ ೧೨ನೆಯ ಮನೆಯಾದ ೭ನೆಯ ಭಾವವು ಆಯುಷ್ಯವನ್ನು ವ್ಯಯಗೊಳಿಸುತ್ತದೆ , ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಜಾತಕನ ಆಯುಷ್ಯಕ್ಕೆ ಮಾರಕವಾದ ಈ ೭ನೇ ಭಾವವನ್ನು ಮಾರಕಭಾವ ಎಂದು ಕರೆಯುತ್ತೇವೆ.

ಅದೇ ರೀತಿ ಭಾವಾತ್ ಭಾವಂ ಸಿದ್ಧಾಂತದ ಪ್ರಕಾರ ಆಯುಷ್ಯ ಭಾವವಾದ ೮ನೆಯ ಭಾವದಿಂದ ೮ನೆಯ ಭಾವವಾದ ಜನ್ಮಕುಂಡಲಿಯ ೩ನೇ ಭಾವವೂ ಆಯುಷ್ಯದ ವಿಕಾರವನ್ನೇ ಸೂಚಿಸುವುದರಿಂದ , ಆ ಮೂರನೇ ಭಾವಕ್ಕೆ ೧೨ ನೆಯ ಭಾವವಾದ ಜನ್ಮಕುಂಡಲಿಯ ೨ನೆಯ ಭಾವವೂ ಸಹ ಮಾರಕಭಾವ ವಾಗುತ್ತದೆ, ಹಾಗಾಗಿ ಜನ್ಮಕುಂಡಲಿಯಲ್ಲಿ ಮನುಷ್ಯನ ಆಯುಷ್ಯಕ್ಕೆ ಮಾರಕವಾದ ಎರಡು ಭಾವಗಳನ್ನು ನಾವು ಕಾಣುತ್ತೇವೆ. ಈ ಮಾರಕಭಾವಗಳಲ್ಲಿ ಯಾವ ರಾಶಿಗಳಿವೆಯೋ ಆ ರಾಶಿಗಳ ಅಧಿಪತಿಗಳನ್ನು ಮಾರಕ ಗ್ರಹಗಳು ಅಥವಾ ಮಾರಾಕಾಧಿಪತಿಗಳು ಎಂದು ಕರೆಯುತ್ತೇವೆ.

। ಪ್ರಬಲ ಮಾರಕ

೨ ಮತ್ತು ೭ , ಈ ಎರಡರಲ್ಲಿ ಪ್ರಬಲ ಮಾರಕ ಯಾವುದು?

೮ನೇ ಭಾವ ಆಯುಷ್ಯವನ್ನು ಸೂಚಿಸುತ್ತದೆ ಆದರೆ ೩ನೇ ಭಾವ ಆಯುಷ್ಯ ಹಾಗೂ ಪರಾಕ್ರಮ ಎರಡನ್ನೂ ಸೂಚಿಸುತ್ತದೆ.

  • ೭ನೆಯ ಭಾವ ೮ನೆಯ ಭಾವಕ್ಕೆ ವ್ಯಯಸ್ಥಾನವಾಗಿದ್ದು ಆಯುಷ್ಯವನ್ನು ವ್ಯಯಗೊಳಿಸುತ್ತದೆ
  • ಆದರೆ ೩ನೆಯ ಭಾವಕ್ಕೆ ೧೨ನೆಯ ಮನೆಯಾದ ೨ನೆಯ ಭಾವವು ಆಯುಷ್ಯ ಹಾಗೂ ಪರಾಕ್ರಮ(ಧೈರ್ಯ) ಎರಡನ್ನೂ ವ್ಯಯಗೊಳಿಸುತ್ತದೆ.

ಹೀಗಿರುವಾಗ ಒಬ್ಬ ಮನುಷ್ಯನಲ್ಲಿ, ಧೈರ್ಯ, ಶೌರ್ಯ, ಪರಾಕ್ರಮಗಳ ಕೊರತೆಯುಂಟಾದರೆ, ಆ ವ್ಯಕ್ತಿ ತನ್ನ ಸಂಸಾರದಲ್ಲಿನ ಸಮಸ್ಯೆಗಳನ್ನ ಎದುರಿಸಿ ಹೇಗೆ ಜೀವನವನ್ನ ಹೇಗೆ ನಡೆಸಬಲ್ಲ? ಹಾಗಾಗಿ, 2ನೇ ಭಾವವು 7ನೇ ಭಾವಕ್ಕಿಂತ ಪ್ರಬಲ ಮಾರಕವಾಗಿದೆ, ಹಾಗೂ 2ನೇ ಭಾವದಲ್ಲಿರುವ ರಾಶಿಯ ಅಧಿಪತಿಯು ಜಾತಕನಿಗೆ ಪ್ರಬಲ ಮಾರಾಕನಾಗಿರುತ್ತಾನೆ.

2 ಹಾಗೂ 7 ನೇ ಅಧಿಪತಿಯ ದಶೆ

ಯಾವಾಗ ಈ 2 ಹಾಗೂ 7 ನೇ ಅಧಿಪತಿಯ ದಶೆ ಬರುತ್ತದೆಯೋ ಅಂದರೆ ದ್ವಿತೀಯಾಧಿಪತಿ ಹಾಗೂ ಸಪ್ತಮಾಧಿಪತಿ ದಶೆ ಬರುತ್ತದೆಯೋ ಆಗ ಆ ಜಾತಕನ ಜೀವನದಲ್ಲಿ ಅಥವಾ ಸ್ವಾಸ್ಥ್ಯತೆಯಲ್ಲಿ ಒಂದಲ್ಲ ಒಂದು ರೀತಿ ಸಮಸ್ಯೆ ಕಾಣಿಸಿಕೊಳ್ಳುತ್ತವೆ.

ಒಂದು ವೇಳೆ 2ನೇ ಭಾವದ ಮತ್ತು 7ನೇ ಭಾವದ ಅಧಿಪತಿಗಳು ಲಗ್ನಾಧಿಪತಿಗೆ ಶತ್ತ್ರುವಾಗಿದ್ದರೆ, ಸ್ವಾಸ್ಥ್ಯ ಸಂಬಂಧಿ ಸಮಸ್ಯೆಗಳು ಖಂಡಿತವಾಗಿಯೂ ಬರುತ್ತದೆ. 2 ಹಾಗೂ 7ನೇ ಭಾವದ ಅಧಿಪತಿಗಳು ಲಗ್ನಾಧಿಪತಿಗೆ ಮಿತ್ರ ಗ್ರಹವೇ, ಶತ್ತ್ರುಗ್ರಹವೇ ಅಥವಾ ಯಾರು ಅಥವಾ ಎಂಬುವುದನ್ನು ಸರಿಯಾಗಿ ತಿಳಿದುಕೊಂಡು ತದಾನಂತರ ಮಾರಾಭಾವಗಳ, ಮಾರಕ ಗ್ರಹಗಳ ಫಲಗಳನ್ನು ತಿಳಿದುಕೊಳ್ಳಬೇಕು.

ಇದು ಮಾರಕ ಗ್ರಹಗಳಿಗೆ ಸಂಬಂಧಿಸಿದ ಹಾಗೆ ಒಂದು ಸಂಚಿಕೆ, ಮುಂದಿನ ಸಂಚಿಕೆ ಯಲ್ಲಿ ನಾವು ಜ್ಯೋತಿಷ್ಯದ ಉಳಿದ ಭಾಗಗಳನ್ನು ನೋಡೋಣ.

|| ಶ್ರೀ ಕೃಷ್ಣಾರ್ಪನಮಸ್ತು ||

Latest Posts

ನಿಮ್ಮದೊಂದು ಉತ್ತರ